
ಒಬ್ಬ ವ್ಯಕ್ತಿಯ ಜಾತಕ ನೋಡಬೇಕಾದರೆ ಸರಿಯಾದ ವಿವರ ಇರಲೇ ಬೇಕು ಅಂದರೆ ಹುಟ್ಟಿದ ದಿನಾಂಕ, ಹುಟ್ಟಿದ ಸಮಯ, ಹುಟ್ಟಿದ ಸ್ಥಳ ತುಂಬಾ ಮುಖ್ಯ ಕೇವಲ ಹುಟ್ಟಿದ ದಿನಾಂಕದಿಂದ ಅಂದರೆ ಚಂದ್ರನನ್ನು ನೋಡಿ ಹೇಳುತ್ತಾರೆ . ಅದು ಅಷ್ಟು ನಿಖರವಾಗಿರುವುದಿಲ್ಲ.ಈಗ ವ್ಯಕ್ತಿಯ ಸ್ವಭಾವದ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಲಗ್ನ ಜಾತಕನು ಚಂದ್ರ ಆತನ ಮನಸ್ಸಿನ ಸ್ಥಿತಿ.
ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬುದು ಲಗ್ನ ಮತ್ತು ಲಗ್ನ ಲಾರ್ಡ್ (ಲಗ್ನ ರಾಶಿ ಸ್ವಾಮಿ) ಮೇಲೆ ನಿರ್ಧಾರವಾಗುತ್ತದೆ. ಲಗ್ನದಲ್ಲಿ ಶುಭಗ್ರಹ ಸ್ಥಿತವಾಗಿದ್ದರೆ ಅಥವಾ ಶುಭಗ್ರಹದ ದೃಷ್ಠಿಯಿದ್ದರೆ ಮತ್ತು ಲಗ್ನ ರಾಶಿ ಸ್ವಾಮಿ ಮೇಲೆ ಶುಭಗ್ರಹದ ದೃಷ್ಠಿ ಇದ್ದರೆ , ಆತ ತುಂಬಾ ಒಳ್ಳೆಯವನು ಉದಾಹರಣೆಗೆ ಲಗ್ನದಲ್ಲಿ ಶುಕ್ರ ಗ್ರಹ ಇದ್ದು ಲಗ್ನ ರಾಶಿ ಸ್ವಾಮಿಯನ್ನು ಗುರು ಗ್ರಹ ತನ್ನ ಐದು, ಏಳು ಅಥವಾ ಒಂಬತ್ತನೇ ದೃಷ್ಟಿಯಿಂದ ನೋಡಿದರೆ ಜಾತಕನು ಒಳ್ಳೆಯವನು [ಗುರು, ಶುಕ್ರ, ಬುಧ ಮತ್ತು ಚಂದ್ರ ಶುಭಗ್ರಹಗಳು]
ಲಗ್ನದಲ್ಲಿ ಪಾಪ ಗ್ರಹವಿದ್ದು ಅಥವಾ ಪಾಪ ಗ್ರಹದ ದೃಷ್ಠಿಯಿದ್ದರೆ, ಲಗ್ನ ರಾಶಿ ಸ್ವಾಮಿ ಮೇಲೆ ಪಾಪ ಗ್ರಹದ ದೃಷ್ಠಿ ಇದ್ದರೆ ಜಾತಕನು ಕೆಟ್ಟವನಾಗಿರುತ್ತಾನೆ. ಉದಾಹರಣೆಗೆ ಲಗ್ನದಲ್ಲಿ ರಾಹು ಇದ್ದು ಲಗ್ನ ರಾಶಿ ಸ್ವಾಮಿ ಮೇಲೆ ಶನಿ ಗ್ರಹದ ದೃಷ್ಠಿ ಇದ್ದರೆ ಅಥವಾ ಜೊತೆಯಲ್ಲೆ ಕುಳಿತ್ತಿದ್ದರೆ ಕೆಟ್ಟವನಾಗಿರುತ್ತಾನೆ. ಅಂದರೆ ತುಂಬಾ ಸ್ವಾರ್ಥಿಯಾಗಿರುತ್ತಾರೆ. ಇಂತಹ ವ್ಯಕ್ತಿಗಳೊಡನೆ ಯಾವುದೇ ರೀತಿಯ ವ್ಯವಹಾರ ಮಾಡುವುದು ಒಳ್ಳೆದಲ್ಲ ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರು ಮಾಡುವರಾಗಿರುತ್ತಾರೆ. [ರಾಹು ,ಕೇತು,ಶನಿ, ಮಂಗಳ ಮತ್ತು ಸೂರ್ಯ ಅಶುಭಗ್ರಹಗಳು , ಸೂರ್ಯ ಹಾಗೂ ಮಂಗಳ ಗ್ರಹಗಳನ್ನು ಕ್ರೂರಿ ಗ್ರಹಗಳು ಎಂದು ಕರೆಯುತ್ತಾರೆ. ಆದರೆ ಕೆಲವು ವಿಷಯಗಳಲ್ಲಿ ಪಾಪಿ ಗ್ರಹಗಳು ಅಂತ ತೆಗೆದುಕೊಳ್ಲುತ್ತಾರೆ.]
ಮುಕ್ತಾಯ
ಯಾರ ಬಗ್ಗೆ ನೋಡಲೂ ಇಚ್ಚಿಸುವಿರೋ ಅವರ ಸರಿಯಾದ ಹುಟ್ಟಿದ ದಿನಾಂಕ , ಹುಟ್ಟಿದ ಸಮಯ, ಮತ್ತು ಹುಟ್ಟಿದ ಸ್ಥಳ ತುಂಬಾ ಮುಖ್ಯ ಎಲ್ಲಾ ಸರಿಯಾಗಿದ್ದಾಗ ಮಾತ್ರ ಇದನ್ನು ನೋಡಬೇಕು. ಗೊತ್ತಿಲ್ಲ ಎಂದರೆ ಇದನ್ನು ನೋಡಲೇ ಬಾರದು.