ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲಕ ವ್ಯಕ್ತಿಯ ಗುಣ ತಿಳಿಯುವುದು ಹೇಗೆ?

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಗುಣ ತಿಳಿಯಲೂ ಹೃದಯ ರೇಖೆ ಬಹಳ ಮುಖ್ಯವಾಗುತ್ತದೆ. ಹೃದಯ ರೇಖೆಯಲ್ಲಿ ಕೆಲವು ಪ್ರಕಾರಗಳಿವೆ.

೧) ಗುರು ಪರ್ವತದಿಂದ ಹೃದಯ ರೇಖೆ ಶುರುವಾಗಿದ್ದರೆ ಅಂತವರು ವಿಶಾಲ ಹೃದಯದವರಾಗಿರುತ್ತಾರೆ,ಆಶಾವಾದಿಗಳಾಗಿರುತ್ತರೆ,ಯಾರಿಗೂ ನಂಬಿಕೆ ದ್ರೋಹ ಮಾಡುವುದಿಲ್ಲ. ಎಲ್ಲಾರನ್ನು ಪ್ರೀತಿಸುತ್ತಾರೆ.

೨) ಶನಿ ಪರ್ವತ ಹಾಗೂ ಗುರು ಪರ್ವತದ ನಡುವೆ ಯಿಂದ ಶುರುವಾಗಿದ್ದರೆ. ತುಂಬಾ ಸಮತೋಲನ ದಿಂದ ಎಲ್ಲಾ ವಿಷಯವನ್ನು ನಿಭಾಯಿಸುತ್ತಾರೆ.

೩) ಶನಿ ಪರ್ವತದಿಂದ ಶುರುವಾಗಿದ್ದರೆ ತಮ್ಮ ಬಗ್ಗೆ ಮಾತ್ರ ಯೊಚಿಸುವವರಾಗಿರುತ್ತಾರೆ. ಕಾಮದ ವಾಸನೆ ಹೆಚ್ಚಿರುತ್ತದೆ. ಕುತುಂಬದ ಮೇಲೆ ಖಾಳಜಿ ಇದ್ದರು ತೋರ್ಪಡಿಸುವುದಿಲ್ಲ.ಕಾಮದ ವಿಷಯದಲ್ಲಿ ಯಾವುದೇ ರಿಸ್ಕ್‌ ಬೇಕಾದರೂ ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ.

೪) ಮಂಗಳ ಪರ್ವತದಿಂದ ಶುರುವಾಗಿದ್ದರೆ ತುಂಬಾ ಕೋಪಿಷ್ಟರಾಗಿರುತ್ತಾರೆ. ಪ್ರೀತಿಸೋ ಮುನ್ನ ಈ ರೇಖೆಯನ್ನು ಒಮ್ಮೆ ನಿಮ್ಮ ಸಂಗಾತಿಯ ಕೈಯಲ್ಲಿ ಇದೆಯೇ ಎಂದು ಖಚಿತ ಪಡಿಸಿ ಕೊಲ್ಳುವುದು ಒಳಿತು,ಇಲ್ಲದೆ ಹೋದರೆ ಮುಂದೆ ಪಶ್ಚತಾಪ ಪಡಬೇಕಾಗುತ್ತದೆ.

ಮುಕ್ತಾಯ

ಇದು ಆರಂಭಿಕ ಹಂತ ಅಂಗೈಯಲ್ಲಿ ಚಿಹ್ನೆಗಳು ಹಾಗೂ ಪರ್ವತಗಳ ಸ್ಥಿತಿಯಿಂದ ಸ್ವಲ್ಪ ಬದಲಾವಣೆ ಆಗಬಹುದು.